ಗ್ರೀನ್, ಜಾರ್ಜ್

1793-1841. ಇಂಗ್ಲಿಷ್ ಗಣಿತಜ್ಞ. ಗಣಿತೀಯ ಭೌತಶಾಸ್ತ್ರಕ್ಕೆ ಇವನ ಕೊಡುಗೆ ಅಪಾರ. ವೃತ್ತಿಯಿಂದ ಗಿರಣಿ ಕೆಲಸವನ್ನು ಅನುಸರಿಸಿದರೂ ಗಣಿತಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಶಾಲೆಯಲ್ಲಿ ಕಲಿಯುವುದಕ್ಕಿಂತ ಹೆಚ್ಚಿನ ಅಭ್ಯಾಸವನ್ನು ತಾನೇ ಮಾಡಿಕೊಂಡ. ಭೌತಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಈತ ಅನುಸರಿಸುತ್ತಿದ್ದುದು ಒಂದು ಸಾಧಾರಣ ಮಾರ್ಗ. ಎಸ್ಸೆ ಆನ್ ದಿ ಅಪ್ಲಿಕೇಷನ್ ಮ್ಯಾಥ್‍ಮ್ಯಾಟಿಕಲ್ ಅನಾಲಿಸಿಸ್ ಟು ದಿ ಥೊಯೊರಿ ಆಫ್ ಎಲೆಕ್ಟ್ರಿಸಿಟಿ ಆಂಡ್ ಮ್ಯಾಥ್‍ಮ್ಯಾಟಿಕ್ಸ್ ಎಂಬ ಪ್ರೌಢ ಪ್ರಬಂಧವನ್ನು ರಚಿಸಿ ನಾಟಿಂಗ್‍ಹ್ಯಾಮಿನಲ್ಲಿ ಈತ ಪ್ರಕಟಿಸಿದ (1828). ಈ ಪ್ರಬಂಧದಲ್ಲಿ ಫ್ರೆಂಚ್ ಗಣಿತಜ್ಞ ಎಸ್.ಡಿ ಪಾಯಸಾನನ (1781-1840) ವಿದ್ಯುತ್ ಮತ್ತು ಕಾಂತವಿಭಾಗಗಳ ಸಂಶೋಧನೆಯನ್ನು ಕುರಿತಂತೆ ಪ್ರಸಾಮಾನ್ಯೀಕರಣಗಳನ್ನು ವಿವರಣೆಗಳನ್ನೂ ಗ್ರೀನ್ ನೀಡಿದ್ದಾನೆ. ವಿದ್ಯುತ್ ಮತ್ತು ಕಾಂತ ಪ್ರಕರಣಗಳಲ್ಲಿ ಕಾಣಬರುವ ಪೊಟೆನ್ಯಿಯಲ್ (ವಿಭವ) ಎಂಬ ಪದನ್ನು ಮೊಟ್ಟಮೊದಲಿಗೆ ಬಳಸಿದ್ದು ಈತನೇ. ಈ ಎರಡೂ ಕ್ಷೇತ್ರಗಳನ್ನು ಕುರಿತಂತೆ ವಿಭವದ ಗುಣಧರ್ಮಗಳನ್ನು ತಿಳಿಸುವ ಪ್ರಮೇಯ (ನೋಡಿ- ಗ್ರೀನನ-ಪ್ರಮೇಯ). ಸ್ಕಾಟ್‍ಲೆಂಡಿನ ಗಣಿತಜ್ಞ ಲಾರ್ಡ್‍ಕೆಲ್ವಿನ್ (1824-1907) ಗ್ರೀನನ ಪ್ರೌಢಪ್ರಬಂಧಗಳನ್ನು 1846ರಲ್ಲಿ ಪುನರ್ ಮುದ್ರಿಸುವವರೆಗೂ ಅದರ ವಿಷಯ ಬಹಳ ಮಂದಿಗೆ ತಿಳಿದಿರಲಿಲ್ಲ. 	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ